ಮೀನರಾಶಿ
ಟ್ರಾಫಿಕ್ ನಲ್ಲಿ ಮರ್ಸಿಡಿಸ್ ಕಾರಿನಲ್ಲಿ ಕುಳಿತ, ಟೀಶರ್ಟ್ ಹುಡುಗಿಯೊಬ್ಬಳು ಟೈಮ್ಸ್ ಆಫ್ ಇಂಡಿಯಾದಲ್ಲಿ ಮೀನರಾಶಿಯ ಭವಿಷ್ಯ ಒದುತ್ತಿದ್ದಳು,ನನಗೆ ತಟಕ್ಕನೆ ನಮ್ಮೂರಿನ ಮೀನು ಮಾರುವ ಮೀನಮ್ಮ ನೆನಪಾದಳು..
ಅವಳ ಭವಿಷ್ಯವೂ ಮೀನರಾಶಿಯೇ..
ವಾಸನೆಯೊಂದೇ ಜಾಸ್ತಿ!
**********
ಪ್ರಶ್ನೆ
ಎಲ್ಲ ಇವತ್ತು ಹೇಳಲೇಬೇಕೆಂದು ನಿರ್ಧರಿಸಿ,
ಹುಡುಗ ಮುಗುಳು ನಗುತ್ತ ಅವಳೆದುರು ನಿಂತ
ಅವಳು ಕಣ್ಣಿನಲ್ಲಿ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿಕೊಂಡು
ಅವನೆಡೆಗೆ ನೋಡಿದಳು
ಕ್ವೆಶ್ಚನ್ ಮಾರ್ಕಿನ ತುದಿ ಎಲ್ಲವನ್ನೂ ಚುಚ್ಚಿದಂತೆನಿಸಿ ಅಲ್ಲಿಂದ ಹೊರಟುಬಿಟ್ಟ**********
..
ಮೊದಲನೇದು ಸಮಯ ಸ್ಪೂರ್ತಿ.
ReplyDeleteಎರಡನೇದು ಭಾವ ಬಿಂದು.
ಎರಡೂ ಸುಂದರವಾಗಿವೆ.
ಬರೆಯುತ್ತಿರಿ
ಸ್ವರ್ಣ
ಧನ್ಯವಾದಗಳು ಸ್ವರ್ಣ ಅವರೇ.
ReplyDeleteನನ್ನ ಬ್ಲಾಗಿಗೆ ಸ್ವಾಗತ..
ಬರುತ್ತಿರಿ:)
chennaagide, nice one :)
ReplyDeleteThanks subrahmanya,
ReplyDeleteI am glad that u liked it.
Nice ones.
ReplyDelete