Saturday, 3 December 2011

ನನ್ನ ತಲೆ

ಮೀನರಾಶಿ
ಟ್ರಾಫಿಕ್ ನಲ್ಲಿ ಮರ್ಸಿಡಿಸ್ ಕಾರಿನಲ್ಲಿ ಕುಳಿತ, ಟೀಶರ್ಟ್ ಹುಡುಗಿಯೊಬ್ಬಳು ಟೈಮ್ಸ್ ಆಫ್ ಇಂಡಿಯಾದಲ್ಲಿ ಮೀನರಾಶಿಯ ಭವಿಷ್ಯ ಒದುತ್ತಿದ್ದಳು,

ನನಗೆ ತಟಕ್ಕನೆ ನಮ್ಮೂರಿನ ಮೀನು ಮಾರುವ ಮೀನಮ್ಮ ನೆನಪಾದಳು..
ಅವಳ ಭವಿಷ್ಯವೂ ಮೀನರಾಶಿಯೇ..
 

ವಾಸನೆಯೊಂದೇ ಜಾಸ್ತಿ!
                                                     **********
 
ಪ್ರಶ್ನೆ

ಎಲ್ಲ ಇವತ್ತು ಹೇಳಲೇಬೇಕೆಂದು ನಿರ್ಧರಿಸಿ,
ಹುಡುಗ ಮುಗುಳು ನಗುತ್ತ ಅವಳೆದುರು ನಿಂತ
ಅವಳು ಕಣ್ಣಿನಲ್ಲಿ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿಕೊಂಡು
ಅವನೆಡೆಗೆ ನೋಡಿದಳು
ಕ್ವೆಶ್ಚನ್ ಮಾರ್ಕಿನ ತುದಿ ಎಲ್ಲವನ್ನೂ ಚುಚ್ಚಿದಂತೆನಿಸಿ ಅಲ್ಲಿಂದ ಹೊರಟುಬಿಟ್ಟ

                                                       **********
..

5 comments:

  1. ಮೊದಲನೇದು ಸಮಯ ಸ್ಪೂರ್ತಿ.
    ಎರಡನೇದು ಭಾವ ಬಿಂದು.
    ಎರಡೂ ಸುಂದರವಾಗಿವೆ.
    ಬರೆಯುತ್ತಿರಿ
    ಸ್ವರ್ಣ

    ReplyDelete
  2. ಧನ್ಯವಾದಗಳು ಸ್ವರ್ಣ ಅವರೇ.
    ನನ್ನ ಬ್ಲಾಗಿಗೆ ಸ್ವಾಗತ..
    ಬರುತ್ತಿರಿ:)

    ReplyDelete
  3. Thanks subrahmanya,
    I am glad that u liked it.

    ReplyDelete