ಇದೊಂದು ಸ್ವಗತ ..ಮನಸ್ಸಿನ ಎರಡು ಮುಖಗಳ ಸಂಭಾಷಣೆ.. ಭವಿಷ್ಯದ ಬಗ್ಗೆಯೇ ಯಾವಾಗಲು ಚಿಂತಿಸುವ ಮನದ ಕಥೆ ಸಾಧ್ಯವಾದರೆ ಒಮ್ಮೆ ಓದಿನೋಡಿ :)
ಅಳಿಸಲು ನಗಿಸಲು ಸೃಷ್ಟಿಯ ಕಾತುರ
ವಿಕಾಸವಾದ ಎನ್ನಬೇಡ ಎಂದಾಗ ನಾನು ನಗಲೇ?
ಕೇಳಿದರೆ ಅವನು ನಗುತ್ತಾನೆಯೇ !?
ಗೊತ್ತಿಲ್ಲವೇ ಉತ್ತರ? ನನಗೆ ಅರ್ಥವಾಗುವುದಿಲ್ಲ..
ನಾಳೆಯ ಯೋಜನೆಗಳು ಚಿಂತೆಗಳೂ,
ಹತ್ತಿಕೊಂಡು ಮುತ್ತಿಕ್ಕುತಿವೆ
ಹೇಗೆ ನಕ್ಕಾನು ಪಾಪ?
ಇಂದು ಇಂದಿಗೆ ನಾಳೆ ನಾಳೆಗೆ,
ನಾನು ಹೇಳಿದ್ದನ್ನು ಎಂದಾದರೂ ಕೇಳಿದ್ದುಂಟೆ?
ಕಣ್ಣಲ್ಲಿ ಇಣುಕಿ ನೋಡಿದರೆ ಪ್ರೀತಿಯೊಂದೆ ಕಾಣುವ ಅಮ್ಮ, ಅಪ್ಪ.
ಅವರನ್ನು ಅಗಲಿ ಎಷ್ಟು ವರ್ಷ ಬದುಕಲಿ?
ನಿದ್ದೆಯಲ್ಲಿ ಅಮ್ಮನಿಗೇನೋ ಆದಂತೆ ಕೆಟ್ಟ ಕನಸು..
ಮತ್ತೆ ಕಣ್ಣುರೆಪ್ಪೆ ಕೂಡಿಸದಂತೆ ಹೊಟ್ಟೆಯಲ್ಲಿ ತಳಮಳ,
ಏನು ಹೇಳಲಿ ಇವನಿಗೆ?
ಕಣ್ಣು ತುಂಬಿಕೊಳ್ಳುವುದೊಂದೆ ಗೊತ್ತು ಅವನಿಗೆ..
ಅವಳೋ.,, ಮನ ಅರಿಯಲಾಗದ ಹುಡುಗಿ,
ಯಾರ್ಯಾರದೋ ಎಂತೆಥದೋ ಮನಸುಗಳನ್ನು
ತೆರೆದ ಪುಸ್ತಕಗಳಂತೆ ಓದುವವಳು,
ವಿಚಿತ್ರ ಭಾವ ಜಗತ್ತಿನಲ್ಲಿ ಅಲೆದಾಡುವ ಕುಂಟಿ!
ಇವನೆಂದರೆ ನಿರ್ಲಕ್ಷ್ಯ ..
ನನ್ನ ತಪ್ಪೇ? ಎನ್ನುತ್ತಾನೆ ..
ಏನ ಹೇಳಲಿ ಮುಂದೇನು ಎಂದು ನನ್ನ ಕೇಳಿದರೆ?
ಮುಂದೇನೋ ಆಗಬೇಕೆಂಬ ಸಾಧನೆಯ ತವಕ.
ಹಳೆಯ ಹುಣ್ಣುಗಳ ಕೆರೆತ !
ಛೆ ಬಿಟ್ಟುಬಿಡು ನಿನ್ನದೇ ತಪ್ಪು ಅದು ಎನ್ನಲೇ ?
ಕೇಳಲಾರ ಮತ್ತೆ ಅಳು.
ಹುಡುಗಿಯ ಹಾಗೆ ಅಳಬೇಡ ಅನ್ನಲಾಗುವುದಿಲ್ಲ ,
ಮನದಾಳದಲ್ಲಿ ಅವನು ಹುಡುಗಿಯೇ!!
ಕಷ್ಟ ಸುಖ ಹಂಚಿಕೊಳ್ಳಲು ನಾನೊಬ್ಬನೇ ಗೆಳೆಯ ..
ಅದಕ್ಕೇ ಡಾರ್ವಿನ್ ವಿಕಾಸವಾದ: ನೀನುಳಿಯುವುದು ಹೋರಾಡಿದರಷ್ಟೇ ,,
ಬಾಯಿಬಿಟ್ಟು ಕೇಳುತ್ತಾನೆ . ಎಷ್ಟು ಹೊತ್ತು!
ಮತ್ತೆ ಯೋಜನೆಗಳು, ಯೋಚನೆಗಳು..
ಮುಂದೇನು ?
ನನಗಿದೇ ಕೆಲಸ , ವರ್ತಮಾನಕ್ಕೆ ಎಳೆಯುವುದು..
ಎಳೆದೆಳೆದು ಸುಸ್ತಾಗಿ ಮಲಗುವುದು..
ಮತ್ತೆ ಎಳೆಯುವುದು
ಇವನೆಂಥ ಎಳೆಮಗುವೆ? ಅಳಲು!
ಅಸಹನೆಗೂ ತಾಳ್ಮೆಯಿಲ್ಲ ನನಗೆ!
ಅದಕ್ಕೆ ಮುಗುಳ್ನಗುತ್ತೇನೆ ..
ಅವನು ಇನ್ನೊಮ್ಮೆ ಮುಂದೇನು ಎನ್ನುತ್ತಾನೆ!!!!
ಅಳಿಸಲು ನಗಿಸಲು ಸೃಷ್ಟಿಯ ಕಾತುರ
ವಿಕಾಸವಾದ ಎನ್ನಬೇಡ ಎಂದಾಗ ನಾನು ನಗಲೇ?
ಕೇಳಿದರೆ ಅವನು ನಗುತ್ತಾನೆಯೇ !?
ಗೊತ್ತಿಲ್ಲವೇ ಉತ್ತರ? ನನಗೆ ಅರ್ಥವಾಗುವುದಿಲ್ಲ..
ನಾಳೆಯ ಯೋಜನೆಗಳು ಚಿಂತೆಗಳೂ,
ಹತ್ತಿಕೊಂಡು ಮುತ್ತಿಕ್ಕುತಿವೆ
ಹೇಗೆ ನಕ್ಕಾನು ಪಾಪ?
ಇಂದು ಇಂದಿಗೆ ನಾಳೆ ನಾಳೆಗೆ,
ನಾನು ಹೇಳಿದ್ದನ್ನು ಎಂದಾದರೂ ಕೇಳಿದ್ದುಂಟೆ?
ಕಣ್ಣಲ್ಲಿ ಇಣುಕಿ ನೋಡಿದರೆ ಪ್ರೀತಿಯೊಂದೆ ಕಾಣುವ ಅಮ್ಮ, ಅಪ್ಪ.
ಅವರನ್ನು ಅಗಲಿ ಎಷ್ಟು ವರ್ಷ ಬದುಕಲಿ?
ನಿದ್ದೆಯಲ್ಲಿ ಅಮ್ಮನಿಗೇನೋ ಆದಂತೆ ಕೆಟ್ಟ ಕನಸು..
ಮತ್ತೆ ಕಣ್ಣುರೆಪ್ಪೆ ಕೂಡಿಸದಂತೆ ಹೊಟ್ಟೆಯಲ್ಲಿ ತಳಮಳ,
ಏನು ಹೇಳಲಿ ಇವನಿಗೆ?
ಕಣ್ಣು ತುಂಬಿಕೊಳ್ಳುವುದೊಂದೆ ಗೊತ್ತು ಅವನಿಗೆ..
ಅವಳೋ.,, ಮನ ಅರಿಯಲಾಗದ ಹುಡುಗಿ,
ಯಾರ್ಯಾರದೋ ಎಂತೆಥದೋ ಮನಸುಗಳನ್ನು
ತೆರೆದ ಪುಸ್ತಕಗಳಂತೆ ಓದುವವಳು,
ವಿಚಿತ್ರ ಭಾವ ಜಗತ್ತಿನಲ್ಲಿ ಅಲೆದಾಡುವ ಕುಂಟಿ!
ಇವನೆಂದರೆ ನಿರ್ಲಕ್ಷ್ಯ ..
ನನ್ನ ತಪ್ಪೇ? ಎನ್ನುತ್ತಾನೆ ..
ಏನ ಹೇಳಲಿ ಮುಂದೇನು ಎಂದು ನನ್ನ ಕೇಳಿದರೆ?
ಮುಂದೇನೋ ಆಗಬೇಕೆಂಬ ಸಾಧನೆಯ ತವಕ.
ಹಳೆಯ ಹುಣ್ಣುಗಳ ಕೆರೆತ !
ಛೆ ಬಿಟ್ಟುಬಿಡು ನಿನ್ನದೇ ತಪ್ಪು ಅದು ಎನ್ನಲೇ ?
ಕೇಳಲಾರ ಮತ್ತೆ ಅಳು.
ಹುಡುಗಿಯ ಹಾಗೆ ಅಳಬೇಡ ಅನ್ನಲಾಗುವುದಿಲ್ಲ ,
ಮನದಾಳದಲ್ಲಿ ಅವನು ಹುಡುಗಿಯೇ!!
ಕಷ್ಟ ಸುಖ ಹಂಚಿಕೊಳ್ಳಲು ನಾನೊಬ್ಬನೇ ಗೆಳೆಯ ..
ಅದಕ್ಕೇ ಡಾರ್ವಿನ್ ವಿಕಾಸವಾದ: ನೀನುಳಿಯುವುದು ಹೋರಾಡಿದರಷ್ಟೇ ,,
ಬಾಯಿಬಿಟ್ಟು ಕೇಳುತ್ತಾನೆ . ಎಷ್ಟು ಹೊತ್ತು!
ಮತ್ತೆ ಯೋಜನೆಗಳು, ಯೋಚನೆಗಳು..
ಮುಂದೇನು ?
ನನಗಿದೇ ಕೆಲಸ , ವರ್ತಮಾನಕ್ಕೆ ಎಳೆಯುವುದು..
ಎಳೆದೆಳೆದು ಸುಸ್ತಾಗಿ ಮಲಗುವುದು..
ಮತ್ತೆ ಎಳೆಯುವುದು
ಇವನೆಂಥ ಎಳೆಮಗುವೆ? ಅಳಲು!
ಅಸಹನೆಗೂ ತಾಳ್ಮೆಯಿಲ್ಲ ನನಗೆ!
ಅದಕ್ಕೆ ಮುಗುಳ್ನಗುತ್ತೇನೆ ..
ಅವನು ಇನ್ನೊಮ್ಮೆ ಮುಂದೇನು ಎನ್ನುತ್ತಾನೆ!!!!
No comments:
Post a Comment